ಪ್ರಭಾಸ್.. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ತೆಲುಗು ಚಿತ್ರರಂಗದ ಅಜಾತಶತ್ರು. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಸೈಲೆಂಟ್ ಆಗಿ ಇದ್ದು ಬಿಡುತ್ತಾರೆ. 25ಕ್ಕೂ ಅಧಿಕ ಸಿನಿಮಾಗಳಲ್ಲಿ ಯಂಗ್ ಪ್ರಭಾಸ್ ಸ್ಟಾರ್ ಅಬ್ಬರಿಸಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿ ಗೆದ್ದಿದ್ದಾರೆ.ಆರಂಭದಲ್ಲಿ ಪ್ರಭಾಸ್ ಸಿನಿ ಜರ್ನಿ ಸಾಧಾರಣವಾಗಿಯೇ ಶುರುವಾಗಿತ್ತು. ಬಳಿಕ ರಾಜಮೌಳಿ ನಿರ್ದೇಶನದ 'ಛತ್ರಪತಿ' ಚಿತ್ರ ದೊಡ್ಡದಾಗಿ ಬ್ರೇಕ್ ಕೊಟ್ಟಿತ್ತು. ಮುಂದೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 'ಬಾಹುಬಲಿ' ಸರಣಿ ಸಿನಿಮಾಗಳ ನಂತರ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿಬಿಟ್ಟರು. ಪ್ರಭಾಸ್ ತಮ್ಮ ಸಿನಿ ಕರಿಯರ್‌ನಲ್ಲಿ ಎರಡು ರೀಮೆಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಒಂದು ಕನ್ನಡದ 'ಜೋಗಿ' ಸಿನಿಮಾ ರೀಮೆಕ್ 'ಯೋಗಿ'.